ಸಶಕ್ತ ಸಮಾಜದ ನಿರ್ಮಾಣ

   ಶ್ರೀಗಂಧ ಫೌಂಡೇಶನ್ (ರಿ)
Email: support@shrigandhafoundation.org
    
          English  
    
.    ಸುದ್ದಿ    ಸಿ ಎಸ್ ಆರ್    ದೇಣಿಗೆ    ಕೈಜೋಡಿಸಿ
    .   .   .   .
 
ಶ್ರೀಗಂಧ ಸ್ವಾಸ್ತ್ಯ ಕಾರ್ಯಕ್ರಮ, ರಾಮನಗರ        
  ಇದೇ ತಿಂಗಳ ಶನಿವಾರ, 14 ಫೆಬ್ರವರಿ 2026, ಶ್ರೀಗಂಧ ಫೌಂಡೇಶನ್ನಿಂದ ರಾಮನಗರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗಾಗಿ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು. ಈ ನಿಟ್ಟಿನಲ್ಲಿ ಯೋಗ, ಶುಚಿತ್ವ, ಪರಿಸರದ ನೈರ್ಮಲ್ಯತೆಯ ಬಗ್ಗೆಯೂ ವಿವರಿಸಲಾಯಿತು.ಕಾಲೇಜಿನ ಹೆಣ್ಣು ಮಕ್ಕಳಿಗೆ ಮುಟ್ಟಿನ ಬಗ್ಗೆ ಪ್ರತ್ಯೇಕವಾಗಿ ನುರಿತ ವೈದ್ಯರಿಂದ ಕಾರ್ಯಾಗಾರವನ್ನು ನಡೆಸಿ, ಮರುಬಳಕೆ ಮಾಡುವ ಸ್ಯಾನಿಟರಿ ಪ್ಯಾಡ್ ಗಳ ವಿತರಣೆ ಮಾಡಲಾಯಿತು.ಕಾಲೇಜಿನ ವಿದ್ಯಾರ್ಥಿನಿಯರು, ಶಿಕ್ಷಕಿಯರು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀಗಂಧ ಯೋಧೆಯರು ಮುಟ್ಟಿನ ಸ್ವಚ್ಛತೆ (Menstrual Hygiene) ಬಗ್ಗೆ, ಪ್ರೌಢಾವಸ್ಥೆಯಲ್ಲಿ ಸಂಭವಿಸುವ ದೈಹಿಕ ಬದಲಾವಣೆಗಳು, ಸ್ವಚ್ಛವಾದ ಸ್ಯಾನಿಟರಿ ಉತ್ಪನ್ನಗಳನ್ನು ಬಳಸುವ ಅಗತ್ಯ, ಹಾಗೂ ಸೋಂಕುಗಳನ್ನು ತಪ್ಪಿಸಲು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಅರಿತುಕೊಂಡರು.ಇದೇ ಸಮಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದ ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿ ಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಶ್ರೀಗಂಧ ಯೋಧರು ಇಂದಿನ ಮತ್ತು ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಗಳ ಕ್ರಾಂತಿ, ಹೊಸ ಹೊಸ ಪ್ರಾಜೆಕ್ಟ್ ಗಳ ಬಗ್ಗೆ, artificial intelligence ನ ಅನುಕೂಲವನ್ನು ಮುಂದಿನ ಪೀಳಿಗೆಯವರು ಪಡೆಯುವ ಬಗ್ಗೆ, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಬರುವ ಅವಕಾಶಗಳು ಮತ್ತು ಅದಕ್ಕೆ ಈಗಿನ ವಿಧ್ಯಾರ್ಥಿಗಳ ಸಿದ್ಧತೆ ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಲಾಯಿತು.ಜೊತೆಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸುಮಾರು Rs.30,000 ರೂಪಾಯಿ ಬೆಲೆ ಬಾಳುವ Ladli ಮರುಬಳಕೆ ಮಾಡಬಹುದಾದ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ವಿತರಿಸಿ, ಆರೋಗ್ಯಕರ ಮತ್ತು ಪರಿಸರ ಸ್ನೇಹಿ ಮರುಬಳಕೆ ಉತ್ಪನ್ನಗಳ ಬಳಕೆಗೆ ಅವರನ್ನು ಪ್ರೋತ್ಸಾಹಿಸಲಾಯಿತು.ನಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಆಸ್ವಾದಂ ಸಂಸ್ಥೆಯ ಸ್ಥಾಪಕರಾದ ಶ್ರೀಮತಿ ರೇಖಾ ಶಶಿಧರ್ ರವರು ಎಲ್ಲಾ ಮಕ್ಕಳಿಗೂ ಸರಳವಾದ ಹಾಗೂ ಅರ್ಥ ಪೂರ್ಣವಾದ ಆಧ್ಯಾತ್ಮಿಕ ವಿಷಯಗಳನ್ನು ತಿಳಿಸಿ ಕೊಟ್ಟರು, ಇವರಿಗೆ ಎಲ್ಲರ ಪರವಾಗಿ ತುಂಬು ಹೃದಯದ ಧನ್ಯವಾದಗಳು.

ನನ್ನ ಪ್ರಾಥಮಿಕ ಶಾಲಾ ದಿನಗಳ ಸಹಪಾಠಿ, ಪ್ರಸ್ತುತ ಈ ಸಂಸ್ಥೆಯ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ ಸುವರ್ಣ ಮಹಾದೇವ್ ಅವರ ಸಾರಥ್ಯದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ನಿಸ್ವಾರ್ಥವಾಗಿ ಕೈಜೋಡಿಸಿದ ಡಾಕ್ಟರ್ ರಶ್ಮಿ ಪ್ರಶಾಂತ್ ಪತಂಗೆ ಅವರ ಸೇವೆಯನ್ನು ಶ್ರೀಗಂಧ ಫೌಂಡೇಶನ್ ಹೆಮ್ಮೆಯಿಂದ ಸ್ಮರಿಸುತ್ತದೆ..

ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದ ವೈದ್ಯರು, ಆಯೋಜಕರು, ಶ್ರೀಗಂಧ ಯೋಧರು, ಶ್ರೀಗಂಧ ಯೋಧರ ಕುಟುಂಬ ವರ್ಗದವರು ಮತ್ತು ಮಕ್ಕಳು, ಕಾಲೇಜಿನ ಆಡಳಿತ ವರ್ಗ, ಶಿಕ್ಷಕ / ಶಿಕ್ಷಕಿಯರು ಮತ್ತು ನನ್ನ ಪ್ರಾಥಮಿಕ ಶಾಲಾ ದಿನದ ಸಹಪಾಠಿ ಮಿತ್ರರಾದ ರಾಜನ್ ಮತ್ತು ಸುನೀತಾ, ನನ್ನ ಇಂಜಿನಿಯರಿಂಗ್ ಕಾಲೇಜಿನ ಸಹಪಾಠಿ ಪ್ರಕಾಶ್ ಅವರ ಖುದ್ದು ಹಾಜರಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು. ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.

   
 
     

 
                                                                   ಹಕ್ಕು ನಿರಾಕರಣೆ    ಸೇವಾ ನಿಯಮಗಳು     
           
ವೀಕ್ಷಕರು : 70543
ನೋಂದಣಿ ಸಂಖ್ಯೆ: DARPAN REG ID - KA/2022/0318919
ಹಕ್ಕುಸ್ವಾಮ್ಯ © 2022 ಶ್ರೀಗಂಧ ಫೌಂಡೇಶನ್ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ