 |
ಸಂಕಲ್ಪ ಲರ್ನಿಂಗ್ ಸಂಸ್ಥೆಯ 5ನೇ ವರ್ಷದ ಸಾಧನೆಗೆ ಅಭಿನಂದನೆಗಳು
ಎಲ್ಲರಿಗೂ ಶುಭಾಶಯಗಳು.
ಸಂಕಲ್ಪ ಲರ್ನಿಂಗ್ ಸಂಸ್ಥೆ ಯು ತನ್ನ ಯಶಸ್ವಿ 5 ವರ್ಷದ ಪಯಣವನ್ನು ಪೂರ್ಣಗೊಳಿಸಿರುವ ಈ ಮಹತ್ವದ ಸಂದರ್ಭದಲ್ಲಿ, ಸಂಸ್ಥೆಯ ಸಮಗ್ರ ತಂಡಕ್ಕೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಶ್ರೀ ಪ್ರಸನ್ನ ಕಾರ್ತಿಕ್ ಅವರಿಗೆ ಶ್ರೀಗಂಧ ಫೌಂಡೇಶನ್ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ಈ ವಿಶೇಷ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಂಕಲ್ಪ ಲರ್ನಿಂಗ್ - ಶ್ರೀಗಂಧ ಫೌಂಡೇಶನ್ ಸಹಭಾಗಿತ್ವದಲ್ಲಿ ನಡೆದ ಕಾಯಕವನ್ನು ನಾವು ಹೆಮ್ಮೆಯಿಂದ ಸ್ಮರಿಸುತ್ತೇವೆ.
ಸಮಾಜದ ಅಗತ್ಯವಿರುವ ವಿದ್ಯಾರ್ಥಿಗಳನ್ನು ಶಿಕ್ಷಣದ ಮೂಲಕ ಶಕ್ತಿಪಡಿಸುವ ಸಂಕಲ್ಪ ಲರ್ನಿಂಗ್ ಸಂಸ್ಥೆಯ ಪ್ರಯತ್ನಗಳು ಶ್ಲಾಘನೀಯವಾಗಿದ್ದು, ಅವುಗಳಿಗೆ ನಮ್ಮ ಪೂರ್ಣ ಬೆಂಬಲ ಮತ್ತು ಮೆಚ್ಚುಗೆ ವ್ಯಕ್ತಪಡಿಸುತ್ತೇವೆ.
ಶ್ರೀಗಂಧ ಫೌಂಡೇಶನ್ 2021ರಿಂದ ಸಂಕಲ್ಪ ಉಪಕ್ರಮದೊಂದಿಗೆ ಕೈಜೋಡಿಸಿ, ಪ್ರಾರಂಭದಲ್ಲಿ KCET ಕಾರ್ಯಕ್ರಮದಡಿ 250 ವಿದ್ಯಾರ್ಥಿಗಳಿಗೆ ಪ್ರಾಯೋಜಕತ್ವವನ್ನು ನೀಡುವ ಮೂಲಕ ತನ್ನ ಸಹಭಾಗಿತ್ವವನ್ನು ಆರಂಭಿಸಿತು. ಇದರ ಮುಂದುವರಿದ ಭಾಗವಾಗಿ, ಸಂಕಲ್ಪ ಲರ್ನಿಂಗ್ ಸಂಸ್ಥೆಯು ದೊಡ್ಡಬಳ್ಳಾಪುರ, ಚಿಕ್ಕಮಗಳೂರು, ನೆಲಮಂಗಲ ಹಾಗೂ ಶಿವಮೊಗ್ಗ ಪ್ರದೇಶಗಳಲ್ಲಿ 8ನೇ ತರಗತಿಯ ಫೌಂಡೇಶನ್ ತರಗತಿಗಳನ್ನು ಯಶಸ್ವಿಯಾಗಿ ಆರಂಭಿಸಿತು.
2024ರಲ್ಲಿ, ಶ್ರೀಗಂಧ ಫೌಂಡೇಶನ್ 100 ಗಂಟೆಗಳ SSLC crash course ಕಾರ್ಯಕ್ರಮದ ಮೂಲಕ 27,500 ವಿದ್ಯಾರ್ಥಿಗಳಿಗೆ ಬೆಂಬಲ ನೀಡಿತು. ಈ ಕಾರ್ಯಕ್ರಮವು ಗಮನಾರ್ಹ ಪರಿಣಾಮವನ್ನುಂಟುಮಾಡಿದ್ದು, ಮೈಸೂರು ಮರಿಮಲ್ಲಪ್ಪ ಶಾಲೆಯ ವಿದ್ಯಾರ್ಥಿ ಧನುಷ್ SSLC ಬೋರ್ಡ್ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದು ವಿಶೇಷ ಸಾಧನೆಗೈದಿದ್ದಾನೆ.
ಈ ಬಲವಾದ ಸಹಭಾಗಿತ್ವವನ್ನು ಮುಂದುವರಿಸುತ್ತಾ, 2025–26ನೇ ಸಾಲಿನಲ್ಲಿ ಶ್ರೀಗಂಧ ಫೌಂಡೇಶನ್ 6,000ಕ್ಕೂ ಅಧಿಕ SSLC ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ್ದು, ದೊಡ್ಡಬಳ್ಳಾಪುರ ಮತ್ತು ಮೈಸೂರು ಜಿಲ್ಲೆಗಳ ಸರ್ಕಾರಿ ಶಾಲೆಗಳಿಗೂ ತನ್ನ ಸೇವೆಯನ್ನು ವಿಸ್ತರಿಸಿದೆ.
ಶ್ರೀಗಂಧ ಫೌಂಡೇಶನ್ ಕರ್ನಾಟಕದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳ ಶಿಕ್ಷಣಾಭಿವೃದ್ಧಿಗೆ ತನ್ನ ಬೆಂಬಲವನ್ನು ನಿರಂತರವಾಗಿ ವಿಸ್ತರಿಸುತ್ತಿದ್ದು, ಭವಿಷ್ಯದಲ್ಲಿಯೂ ಇನ್ನಷ್ಟು ವಿದ್ಯಾರ್ಥಿಗಳ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ಬದ್ಧವಾಗಿದೆ.
ಸಂಕಲ್ಪ ಲರ್ನಿಂಗ್ ಸಂಸ್ಥೆಯು ಮುಂದಿನ ದಿನಗಳಲ್ಲಿ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲೊಂದು ಆಗಿ ಬೆಳೆಯಲಿ ಎಂಬುದು ನಮ್ಮ ಹೃತ್ಪೂರ್ವಕ ಹಾರೈಕೆ.
ಶ್ರೀ ಪ್ರಸನ್ನ ಕಾರ್ತಿಕ್ ಅವರಿಗೆ ಗೌರವಪೂರ್ವಕ ಅಭಿನಂದನೆಗಳು
ಇಂತಿ,
ಶ್ರೀಗಂಧ ಕುಟುಂಬ
|
|
|
 |
ನಮ್ಮೆಲ್ಲರ ಶ್ರೀಗಂಧ ಫೌಂಡೇಶನ್ ಪ್ರತಿಷ್ಠಾನವು ಹಲವಾರು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಅದರಲ್ಲೂ ಬಹು ಮುಖ್ಯವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಲಕ್ಷಾಂತರ ಮಕ್ಕಳ ಶಿಕ್ಷಣಕ್ಕೆ ಬೆನ್ನೆಲುಬಾಗಿ ಸಮಾಜಕ್ಕೆ ವಿಶೇಷವಾದ ಕೊಡುಗೆಯನ್ನು ನೀಡಿದೆ.
ನಮ್ಮ ಶ್ರೀಗಂಧ ಫೌಂಡೇಶನ್ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಇದೇ ಜೂನ್ ೧೩ರಂದು, ರೋಟರಿ ಬೆಂಗಳೂರು ಸ್ಪಂದನಾ ಸಂಸ್ಥೆಯವರು ಈ ಸಾಲಿನ ಕಮ್ಯುನಿಟಿ ಸರ್ವೀಸ್ ಪ್ರಶಸ್ತಿಯನ್ನು ನೀಡಿ
ಗೌರವಿಸಿರುತ್ತಾರೆ.
ಈ ಪ್ರಶಸ್ತಿಯು ನಮ್ಮ ಸಮಾಜಮುಖಿ ಕಾರ್ಯಗಳಿಗೆ ನೀಡಿದ ಮಹತ್ವದ ಗುರುತಾಗಿದೆ. ಇದು ನಮ್ಮ ತಂಡದ ಶ್ರಮ, ನಮ್ಮ ಸಹಯೋಗಿಗಳ ವಿಶ್ವಾಸ ಮತ್ತು ಸಮುದಾಯದ ಸದಸ್ಯರ ಬೆಂಬಲದ ಫಲಿತಾಂಶವಾಗಿದೆ.
ಈ ಗೌರವವು ನಮ್ಮ ಮುಂದಿನ ಸೇವಾ ಪ್ರಯಾಣಕ್ಕೆ ಹೊಸ ಶಕ್ತಿಯಾಗಿದೆ.
ರೋಟರಿ ಬೆಂಗಳೂರು ಸ್ಪಂದನಾ ಸಂಸ್ಥೆಯವರು ನಮ್ಮ ಕಾರ್ಯವೈಖರಿಯನ್ನು ಗುರುತಿಸಿ, ಸನ್ಮಾನಿಸಿ, ಪ್ರಶಸ್ತಿ ನೀಡಿರುವುದನ್ನು ನಾವು ಅತ್ಯಂತ ಹೆಮ್ಮೆಯಿಂದ ಸ್ವೀಕರಿಸಿ, ವಿನಮ್ರರಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ.
ರೋಟರಿ ಬೆಂಗಳೂರು ಸ್ಪಂದನಾ ಸಂಸ್ಥೆಗೆ ನಾವು ಆಭಾರಿಗಳು ಮತ್ತು ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.
ನಮ್ಮ ಪರವಾಗಿ, ಈ ಸನ್ಮಾನವನ್ನು ನಮ್ಮ ಎಲ್ಲ ಸಹಭಾಗಿಗಳಿಗೆ, ದಾನಿಗಳಿಗೆ, ಸ್ವಯಂಸೇವಕರಿಗೆ ಮತ್ತು ನಮ್ಮನ್ನು ಸದಾ ಬೆಂಬಲಿಸುತ್ತಿರುವ ಸಮುದಾಯಕ್ಕೆ ಸಮರ್ಪಿಸುತ್ತೇವೆ.
ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹ ಸದಾ ನಮ್ಮ ಜೊತೆಗೆ ಇರಲಿ. |
|