|
|
|
ಸ್ವಾಸ್ಥ್ಯ ಕಾರ್ಯಕ್ರಮ -17 ಜನವರಿ 2026
|
| |
ಎಲ್ಲರಿಗೂ ನಮಸ್ಕಾರಗಳು,
ಕಳೆದ ಶನಿವಾರ, 17 ನೇ ಜನವರಿಯಂದು, ಶ್ರೀಗಂಧ ಫೌಂಡೇಶನ್ ವತಿಯಿಂದ ಹುಣಸೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಅರ್ಥಪೂರ್ಣ ಹಾಗೂ ಉಪಯುಕ್ತವಾದ ಶ್ರೀಗಂಧ ಸ್ವಾಸ್ಥ್ಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. 350ಕ್ಕೂ ಹೆಚ್ಚು ಪ್ರೌಢ ಶಾಲೆಯ ಬಾಲಕಿಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಮುಟ್ಟಿನ ಸ್ವಚ್ಛತೆ (Menstrual Hygiene) ಕುರಿತು ವಿವರವಾದ ಅರಿವು ಮೂಡಿಸಲಾಯಿತು.
ಮೈಸೂರಿನ ಸುಪ್ರಸಿದ್ಧ ಸರ್ಕಾರಿ ವೈದ್ಯರಾದ ಶ್ರೀಮತಿ ಡಾ. ಜಯಮಾಲಾ ಅವರು ಮುಟ್ಟಿನ ಸಮಯದಲ್ಲಿ ಪಾಲಿಸಬೇಕಾದ ಆರೋಗ್ಯಕರ ಅಭ್ಯಾಸಗಳು, ಸ್ವಚ್ಛತೆಯ ಮಹತ್ವ ಹಾಗೂ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಕುರಿತು ಸರಳವಾಗಿ ವಿವರಿಸಿದರು.
ಆರೋಗ್ಯ ಸಮಾಲೋಚಕರಾದ ಶ್ರೀಮತಿ ರೇಖಾ ಮೇಡಂ ಅವರು ಬಾಲಕಿಯರ ಮಾನಸಿಕ ಆರೋಗ್ಯ, ಆತ್ಮವಿಶ್ವಾಸ ಮತ್ತು ತಮ್ಮ ದೇಹದ ಬಗ್ಗೆ ಮುಕ್ತವಾಗಿ ಮಾತನಾಡುವ ಅಗತ್ಯವನ್ನು ಒತ್ತಿ ಹೇಳಿದರು.
ಈ ಕಾರ್ಯಕ್ರಮವು ಬಾಲಕಿಯರಲ್ಲಿದ್ದ ಅಜ್ಞಾನ, ಭಯ ಮತ್ತು ತಪ್ಪು ಕಲ್ಪನೆಗಳನ್ನು ದೂರಮಾಡಿ, ಆರೋಗ್ಯಕರ ಜೀವನಶೈಲಿಯತ್ತ ಹೆಜ್ಜೆ ಇಡಲು ಪ್ರೇರಣೆಯಾಯಿತು.
ಇಂತಹ ಮಹತ್ವದ ಸಾಮಾಜಿಕ ಸೇವೆಯನ್ನು ಸಮಾಜದ ಅಡಿಪಾಯವಾದ ವಿದ್ಯಾರ್ಥಿನಿಯರಿಗಾಗಿ ನಡೆಸಿ ಕೊಟ್ಟ ಡಾ. ಜಯಮಾಲಾ ಮೇಡಂ ಹಾಗೂ ಸಮಾಲೋಚಕರಾದ ರೇಖಾ ಮೇಡಂ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಧನ್ಯವಾದಗಳು.
ಶ್ರೀಗಂಧ ಯೋಧರಾದ ವಿದ್ಯಾ ಆರಾಧ್ಯ, ಭಾರ್ಗವಿ, ಮಹೇಶ್, ಪ್ರಶಾಂತ್ ಕೊರಡೆ, ಅಶೋಕ್ ಕೊರಡೆ, ಶಶಾಂಕ್, ಲಕ್ಷ್ಮಣ್, ಪಾವನಿ, ವೆಂಕಿ ಅವರ ಉತ್ಸಾಹ, ಸಮಯ ಮತ್ತು ಶ್ರಮಕ್ಕೆ ನಮನಗಳು.
|
| |
|
| |
|
|
|
|
|
|
|
|
|
|